September 5, 2026
Uncategorizedಉದ್ಯೋಗ/ಶಿಕ್ಷಣಕ್ರೀಡೆಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಬಜಪೆ ಬಳಿಯ ಗುರುಪುರದಲ್ಲಿ ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿದ ಅಕ್ಷರ ವಾಹಿನಿ ಬಸ್‌ನ್ನು ಲೋಕಾರ್ಪಣೆಗೊಳಿಸಿದ ಶಾಸಕ ಡಾ. ಭರತ್ ಶೆಟ್ಟಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾದ ಅಕ್ಷರ ವಾಹಿನಿ : ಡಾ. ಭರತ್ ಶೆಟ್ಟಿ ;

ವರದಿ/ ಚಿತ್ರ: ರೋಶನ್ ನೆಲ್ಲಿಗುಡ್ಡೆ

ಮೂಲ್ಕಿ:ಬಜಪೆ ಗುರುಪುರ ಸಮೀಪದ ವಾಮಂಜೂರು ತಿರುವೈಲಿನ ದ.ಕ.ಜಿ.ಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಉದ್ಯಮಿ ರಘು ಸಾಲ್ಯಾನ್ ಅವರು ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಸಹಕಾರದೊಂದಿಗೆ, ಪತ್ನಿ ಮಾಜಿ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರು ಕೊಡುಗೆಯಾಗಿ ನೀಡಿದ ೨೩ ಲಕ್ಷ ರೂ. ಮೌಲ್ಯದ ನೂತನ ಅಕ್ಷರ ವಾಹಿನಿ ಬಸ್‌ನ್ನು ಶಾಸಕ ಡಾ. ಭರತ್ ಶೆಟ್ಟಿ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮಾಜದ ಸಹಭಾಗಿತ್ವ ಅತ್ಯಂತ ಮಹತ್ವ, ತಾವು ಕಲಿತ ಶಾಲೆಯನ್ನೇ ಎರಡನೇ ಮನೆ ಎಂದು ಕಂಡುಕೊಂಡಿರುವ ರಘು ಸಾಲ್ಯಾನ್ ಅವರು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತಿರುವುದು ಶ್ಲಾಘನೀಯ, ಶಾಲೆಗೆ ಈಗಾಗಲೇ ಒಂದು ಬಸ್ ಒದಗಿಸಿದ್ದ ರಘು ಸಾಲ್ಯಾನ್, ಇದೀಗ ಎರಡನೇ ಬಸ್‌ನ್ನೂ ಕೊಡುಗೆಯಾಗಿ ನೀಡಿರುವುದು ವಿಶೇಷ. ಖಾಸಗಿ ಶಾಲೆಗಳ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳೂ ಬಸ್‌ಗಳಲ್ಲಿ ಪ್ರಯಾಣಿಸಬೇಕು, ಸಮವಸ್ತ್ರದ ಜೊತೆಗೆ ಬಣ್ಣದ ಜೆರ್ಸಿ ಧರಿಸಿ ಆತ್ಮವಿಶ್ವಾಸದಿಂದ ಓಡಾಡಬೇಕು ಎಂಬ ಕನಸನ್ನು ಅವರು ನನಸಾಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಮುಖ್ಯ ಶಿಕ್ಷಕ ನಿಂಗರಾಜು ಮಾತನಾಡಿ, ಒಮ್ಮೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆ ಇಂದು ೪೫೦ಕ್ಕೂ ಹೆಚ್ಚು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಲು ಸಮಾಜ ಸ್ಪಂದನೆಯ ದಾನಿಗಳೇ ಕಾರಣ, ಶಾಲೆಯ ಹಿತದೃಷ್ಟಿಯಿಂದ ಅವರೆಲ್ಲರೂ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಕೃಷ್ಣ ಪಾಲೆಮಾರ್ ಮಾತನಾಡಿದರು. ಉದ್ಯಮಿ ಮೋಹನದಾಸ ಶೆಟ್ಟಿ, ಹೇಮಲತಾ ಆರ್. ಸಾಲ್ಯಾನ್, ರಘು ಸಾಲ್ಯಾನ್, ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ, ರೇಷ್ಮಾ, ಈಶ್ವರ್, ಅನಿತಾ, ಶಿವರಾಮ ರಾವ್, ನಿತ್ಯಾನಂದ ಶೆಟ್ಟಿ, ಸ್ವರೂಪಾ ಶೆಟ್ಟಿ, ಗೋಪಾಲ ಯು, ಪುಷ್ಪಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ ಬಂಗೇರ, ಸಂತೋಷ್ ಆಚಾರ್ಯ, ಚರಣ್‌ರಾಜ್, ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಬಾಲಕೃಷ್ಣ ಮಾಸ್ಟರ್, ಲಿಂಗಪ್ಪ ಸಾಲ್ಯಾನ್, ಸಚಿನ್ ಕಾಮತ್, ದಿನೇಶ್ ಜೆ. ಕರ್ಕೇರ ಸಾನದಮನೆ, ಅನಿಲ್ ಶೆಟ್ಟಿ ತಿರುವೈಲು, ಲಕ್ಷ್ಮಣ್ ಶೆಟ್ಟಿಗಾರ, ಉಮಾನಾಥ ಕೊಟ್ಟಾರಿ, ಹರೀಶ್ ದಿವ್ಯಜ್ಯೋತಿ, ಸ್ಟ್ಯಾನಿ ಕುಟಿನ್ಹೊ, ಟ್ರಸ್ಟ್ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.

ಶಿಕ್ಷಕಿ ಗ್ರೆಟ್ಟಾ ಕುಟಿನ್ಹೊ ನಿರೂಪಿಸಿದರು. ಮಂಜುಳಾ ವಂದಿಸಿದರು.

Related posts

ತುಳುವರ ನವಗ್ರಹಗಳು – ತುಳುನಾಡಿನ ಜೀವನತತ್ವ, ಕಾಲಗಣನೆ ಮತ್ತು ಜ್ಞಾನಪರಂಪರೆಯ ಪ್ರತಿಬಿಂಬ;

voiceoftulunadu

ಮಂಗಳೂರು-ಮೂಡುಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದದ ಆವರಣದಲ್ಲಿ‘ಡಾ| ಶ್ರೀಕಾಂತ್ ಲತಾ ಏಕನಾಥ್ ಶಿಂಧೆ ಆಡಿಟೋರಿಯಂ’ ನಿರ್ಮಾಣ ; ದೇಣಿಗೆಗೆ ಮನವಿ ;

Voiceoftulunadu

ಉದ್ಯಾವರ ಪಾಪನಾಶಿನಿ ಸೇತುವೆಯಿಂದ ಹಾರಿ ಯುವಕ ಆತ್ಮಹತ್ಯೆ ಮಂಗಳವಾರ ಸಂಜೆ ಮೃತದೇಹ ಪತ್ತೆ;

Voiceoftulunadu

Leave a Comment