28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಕೃಷಿ/ಭೌಗೋಳಿಕಕ್ರೀಡೆಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕೊಳಲಗಿರಿ “ಹಡಿಲು ಭೂಮಿ ಕೃಷಿ”ಗೆ ಚಾಲನೆ : “ಕೆಸರ್ಡ್ ಒಂಜಿ ದಿನ” ಸಂಭ್ರಮ;

ವರದಿ/ ಚಿತ್ರ: ವಿನೋದ್ ಶೆಟ್ಟಿ ಉಡುಪಿ

ಆಮುಂಜೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘ ಯುವವಿಚಾರ ವೇದಿಕೆ (ರಿ), ಕೊಳಲಗಿರಿ ವತಿಯಿಂದ ಹಡಿಲು ಭೂಮಿ ಕೃಷಿ ಕಾರ್ಯದ ಸಾಂಕೇತಿಕ ಆರಂಭ ಮತ್ತು ಕೆಸರುಗದ್ದೆಯಲ್ಲಿ ಮನೋರಂಜನಾ ಆಟೋಟ ಸ್ಪರ್ಧೆ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮವು ಆಮುಂಜೆ ಪರಿಸರದಲ್ಲಿ ಅದ್ದೂರಿಯಾಗಿ ಜರುಗಿತು.

ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ಉದ್ಯಮಿ ಮೈಕಲ್ ಡಿಸೋಜ, ಉಪ್ಪೂರು ಸಹಕಾರಿ ಸಂಘದ ನಿರ್ದೇಶಕ ರಮೇಶ್ ಕರ್ಕೇರಾ ಉಗ್ಗೇಲ್ ಬೆಟ್ಟು, ಹಿರಿಯರಾದ ಮಾಧವ ಪಾಣ, ಸಂಗೀತಗಾರ ಸಂತೋಷ್ ಪಾಣ, ತುಳು ರಕ್ಷಣಾ ವೇದಿಕೆಯ ರೋಷನ್ ಡಿಸೋಜಾ, ಪೀಟರ್ ಡಿಸೋಜಾ ತೋಡಕಡಿ, ಅಪ್ಪಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಮುಂಜೆಯ ಯುವ ಕೃಷಿಕ ರಿತೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಸಮಾರೋಪದಲ್ಲಿ ಆಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಡಿ ಶೆಟ್ಟಿ, ಆಲ್ವಿನ್ ಡಿಸೋಜಾ, ದೈವ ನರ್ತಕರು ವಿಜಯ ಪಾಣ ತೋನ್ಸೆ, ಸುಷ್ಮಾ ಧೀರಜ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಯುವ ವಿಚಾರ ವೇದಿಕೆಯ ಮಹತ್ವಾಕಾಂಕ್ಷೆಯ ಯೋಜನೆಯಾದ “ಹಡಿಲು ಭೂಮಿ ಕೃಷಿ”ಗೆ ಗದ್ದೆಯಲ್ಲಿ ನಟ್ಟು ನೆಡುವ ಮೂಲಕ ಸಂಕೇತಾತ್ಮಕವಾಗಿ ಚಾಲನೆ ನೀಡಲಾಯಿತು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ, ಅಶೋಕ್ ಕುಮಾರ್, ರವೀಂದ್ರ ಕುಮಾರ್, ಶಶಿಕುಮಾರ್, ಸುಕೇಶ್ ಪಾಣ, ಹೇಮಂತ್, ಶಿವಾನಂದ, ಶಕುಂತಲಾ ಸುಕೇಶ್, ಸೌಮ್ಯ ಶೆಟ್ಟಿ, ಶಾಂತಾ ಸೆಲ್ವರಾಜ್, ಸುಕನ್ಯಾ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸುಬ್ರಮಣ್ಯ ಆಚಾರ್ಯ ನಿರೂಪಿಸಿದರು.

Related posts

ಉದ್ಯಮಿ, ಧಾರ್ಮಿಕ-ಸಾಮಾಜಿಕ ಮುಖಂಡ ಸಖೇಂದ್ರ ಸುವರ್ಣ ಹೃದಯಾಘಾತದಿಂದ ನಿಧನ ಕಾಪು ಬಿಲ್ಲವರ ಸಹಾಯಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು;

Voiceoftulunadu

ಪ್ರಕಾಶ್ ರಾಜ್ 4 ವರ್ಷದಿಂದ ವಿಳಾಸದಲ್ಲಿ ನೆಲೆಸಿಲ್ಲ, ಎಸ್‌ಐಆರ್‌ ಆರೋಪ ಸತ್ಯಕ್ಕೆ ದೂರ: ಕೇಂದ್ರ ನಗರ ಪಾಲಿಕೆ ಸ್ಪಷ್ಟನೆ ;

Voiceoftulunadu

ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ : ಡಾ. ಮಾನಸ ಪತ್ರಕರ್ತ ಜನಾರ್ದನ ಕೊಡವೂರು, ಲೇಖಕಿ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಸನ್ಮಾನ;

Voiceoftulunadu

Leave a Comment