28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಕ್ಕಳಿಗೆ ಪುಸ್ತಕ ಕೊಡಿ – ಸಾಹಿತ್ಯ ಪರಿಚಾರಕ ರತ್ನಾಕರ ಕುಳಾಯಿಮೂಲ್ಕಿ ತಾಲೂಕು ಕ.ಸಾ.ಪ ಕಿನ್ನಿಗೋಳಿಯಲ್ಲಿ ಆಯೋಜನೆಯ ಸಾಹಿತ್ಯ ಸಂವಾದ;

ವರದಿ/ ಚಿತ್ರ :ಈ ಮೀಡಿಯಾ

ಕಿನ್ನಿಗೋಳಿ : ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪುಸ್ತಕಗಳನ್ನು ಕೊಡಿ. ಓದುವಿಕೆ ಅವರಲ್ಲಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಸಾಹಿತ್ಯ ಪರಿಚಾರಕ ರತ್ನಾಕರ ಕುಳಾಯಿ ಹೇಳಿದರು.ಅವರು ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಿನ್ನಿಗೋಳಿಯ ಸಂತೋಷ ಉಡುಪರ ಮನೆ ಗುರುಧಾಮದಲ್ಲಿ ಆಯೋಜಿಸಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಸ್ತಕಗಳಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ಕಂಡಾಗ ಮಕ್ಕಳು ಪಡುವ ಆನಂದವನ್ನು ಗಮನಿಸಬೇಕು. err ಓದುವ ಆಸಕ್ತಿಯನ್ನು ಪ್ರೇರೇಪಿಸಿ. ವಿದೇಶಿ ಪುಸ್ತಕಗಳೂ ಬಂದಿವೆ. ಫ್ಯಾಷನ್ಗಾಗಿಯೂ ಪುಸ್ತಕ ಕೊಳ್ಳುವವರೂ ಇದ್ದಾರೆ. ಅಧ್ಯಯನಕ್ಕಾಗಿ ಕೊಳ್ಳುವವರೂ ಇದ್ದಾರೆ. ಓದಿನ ಸಂತೋಷದ ಅನುಭವಕ್ಕಾಗಿ ಪುಸ್ತಕಗಳನ್ನು ಕೊಳ್ಳುವ ಹವ್ಯಾಸ ಇರಲಿ ಎಂದು ರತ್ನಾಕರ್ ಹೇಳಿದರು.

ಚಾಲನೆ ಮನೆ ಮನೆಗಳಲ್ಲಿ ಗ್ರಂಥಾಲಯಕ್ಕೆಮೂಲ್ಕಿ ಕಸಾಪ ತಾಲೂಕು ಘಟಕ, ಅನಂತ ಪ್ರಕಾಶದ ಸಚ್ಚಿದಾನಂದ ಉಡುಪರ ಸಹಯೋಗದಲ್ಲಿ ಮೂಲ್ಕಿತಾಲೂಕಿನ ಇನ್ನೂರೈವತ್ತಕ್ಕೂ ಹೆಚ್ಚು ಮನೆಗಳಲ್ಲಿ ಮನೆ ಗ್ರಂಥಾಲಯ ಸ್ಥಾಪನೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಚಾಲನೆ ನೀಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ತಾನು ಆರು ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಬಿಡುಗಡೆಗೊಳಿಸಿದ್ದೇನೆ. ಆಸಕ್ತ ಶಾಲೆಗಳಿಗೆ ನೂರು ಕೃತಿಗಳನ್ನು ನೀಡಿದ್ದು, ಮೂಲ್ಕಿ ತಾಲೂಕಿನಲ್ಲಿ ಆಗಲಿರುವ ಮನೆಗ್ರಂಥಾಲಯ ಯೋಜನೆಗೆ ಪುಸ್ತಕಗಳನ್ನು ನೀಡುವುದಾಗಿ ತಿಳಿಸಿದರು.

ಕಳೆದ ೨೫ ವರುಷಗಳಿಂದ ಸರಕಾರ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿಲ್ಲ. ಪರಿಣಾಮ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಮಕ್ಕಳಿಗೆ ಕನ್ನಡ ಓದಲು ಪ್ರೇರೇಪಣೆ ನೀಡುವುದು ಹೇಗೆ? ಕನ್ನಡ ಸಾಹಿತಿಗಳನ್ನು ಪುಸ್ತಕಗಳನ್ನು ಕೊಂಡು ಓದುವ ಪ್ರೋತ್ಸಾಹಿಸಬೇಕಾಗಿದೆ ಪುನರೂರು ಹೇಳಿದರು. ಮೂಲಕ ಎಂದುಊರಿಗೆ ಕೀರ್ತಿ ತಂದ ಮಹಾಸಾಧಕ ಕೊ.ಅ. ಉಡುಪಸಂಸ್ಕೃತ, ಕನ್ನಡ, ಹಿಂದಿ ಹೀಗೆ ಭಾಷಾ ಪಂಡಿತರಾಗಿ, ಅನೇಕ ಶಿಷ್ಯರನ್ನು ಬೆಳೆಸಿದ, ಸಾಹಿತ್ಯ ಸಾಧಕ ಕೊ.ಅ. ಉಡುಪರು ಕಿನ್ನಿಗೋಳಿಯ ಜನತೆಗೆ ಕಾರಂತ, ಕಯ್ಯಾರ, ಅಚ್ಯುತದಾಸ, ಗೋವಿಂದಾಚಾರ್ಯರಂತಹ ಕನ್ನಡಸಾಧಕರನ್ನು ತೋರಿಸಿಕೊಟ್ಟವರು ಎಂದು ಪಾಂಪೈ ಕಾಲೇಜಿನ ನಿವೃತ್ತ ಉಪನ್ಯಾಸಕ ಜೆ. ಬಿ. ಮಿರಾಂದ ಹೇಳಿದರು.

ಎಳತ್ತೂರು ಗೋಪಾಲಕೃಷ್ಣ ದತ್ತಿ ಉಪನ್ಯಾಸದಡಿ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಕೃತಿ ವಿಮರ್ಶೆ ಮಾಡಿದ ಮಿರಾಂದ ಅವರು, ಉಡುಪರು ಪುಸ್ತಕ, ಪತ್ರಿಕೆ ಪ್ರಕಟಣೆಯ ಜೊತೆಗೆ ನೂರಾರು ಬರಹಗಾರರನ್ನು ರೂಪಿಸಿದ, ಸ್ವತಃ ಸಾಹಿತಿಯಾಗಿ ಕಾವ್ಯ ನಾಟಕ, ಕಾದಂಬರಿ, ಲಲಿತ ಪ್ರಬಂಧ ಹೀಗೆ ವಿವಿಧ ವಿಭಾಗಗಳಲ್ಲಿ ಬರೆದಿದ್ದಾರೆ. ನನ್ನಂತಹವನು ಸಂಸ್ಕೃತ ಶ್ಲೋಕಗಳನ್ನು ಕಲಿಯಲು ಅವರು ಪ್ರೇರಣೆಯಾಗಿದ್ದರು. ಸತ್ಯಕಾಮ, ಪಾವೆಂರಂತಹವರ ಸಹ ಪಾಠಿ ಯಾಗಿ ದ್ದು ಕೊಂಡು ಉಡುಪಿಯಲ್ಲಿ ಕಲಾಕೇಂದ್ರ ರೂಪಿಸಿ, ಯುಗಪುರುಷ ಪತ್ರಿಕೆಯ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿ, ಕಿನ್ನಿಗೋಳಿಯಂತಹ ಊರಿಗೆ ಕೀರ್ತಿ ತಂದ ಮಹಾಸಾಧಕ ಎಂದು ಹೇಳಿದರು.

ಸಾನ್ವಿ ಡಿ. ರಾವ್ ಕನ್ನಡದ ಹಾಡುಗಳನ್ನು ಹಾಡಿದರು.ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ವೀಣಾ ಶಶಿಧರ್, ಹೆರಿಕ್ ಪಾಯಸ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.

Related posts

ಒಂದೇ ಕೊಕ್ಕೆಗೆ ತಂದೆ ಮಗಳು ನೇಣು ಬಿಗಿದು ಆತ್ಮಹತ್ಯೆ: ಕಾಸರಗೋಡಿನ ಚೆಮ್ನಾಡ್ ಕೋಳಿಯಡ್ಕ ಎಂಬಲ್ಲಿ ನಡೆದ ಧಾರುಣ ಘಟನೆ;

Voiceoftulunadu

ಕಾಪು ತಾಲೂಕಿನಾಧ್ಯಂತ ಸಂಭ್ರಮದ ನಾಗರ ಪಂಚಮಿನಾಗನ ಶಿಲಾ ಮೂರ್ತಿಗೆ ಹಾಲು, ಸೀಯಾಳದ ಅಭಿಷೇಕ ಮಾಡಿದ ಜನತೆ ;

Voiceoftulunadu

ವಿಟ್ಲಪಿಂಡಿ ಪ್ರಯುಕ್ತ ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆ : ವಿಜೇತರಿಗೆ ಆಕರ್ಷಕ ನಗದು ಬಹುಮಾನ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ;

Voiceoftulunadu

Leave a Comment