27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ

ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ)ನೂತನ ಅಧ್ಯಕ್ಷರಾಗಿ ಸಿಎ ಜಗದೀಶ್ ಬಿ. ಶೆಟ್ಟಿ ಸುರತ್ಕಲ್ ಆಯ್ಕೆ:

ವರದಿ/ ಚಿತ್ರ: ರೋನ್ಸ್ ಬಂಟ್ವಾಳ್

ಮುಂಬೈ, ಜು.03: ಬೃಹತ್ ಮುಂಬೈ ಇಲ್ಲಿನ ಬಂಟ ಲೆಕ್ಕ ಪರಿಶೋಧಕರ ಸಂಘಟನೆಯಾದ ಅಸೋಸಿಯೇಷನ್ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಮುಂಬೈ (ಎಬಿಸಿಎ) ಇದರ ವಾರ್ಷಿಕ ಮಹಾಸಭೆಯು ಕಳೆದ ಬುಧವಾರ (ಜು.01) ಸಂಜೆ ಮುಂಬೈ ಸಾಕಿನಾಕಾದ ಮುಂಬೈ ಮೆಟ್ರೋ ಹೋಟೆಲ್‌ನ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು.

ಅಸೋಸಿಯೇಷನ್‌ನ ಅಧ್ಯಕ್ಷ ಸಿಎ ವಿಶ್ವನಾಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆ ಹಾಗೂ 78ನೇ ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆಗೆ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹಾಗೂ ಎಬಿಸಿಎ ಉಪಾಧ್ಯಕ್ಷ ಸಿಎ ಅಶೋಕ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಜಗದೀಶ್ ಬಿ. ಶೆಟ್ಟಿ, ಕೋಶಾಧಿಕಾರಿ ಸಿಎ ಸುದೇಶ್ ಶೆಟ್ಟಿ ಸೇರಿದಂತೆ ಹಿರಿಯ ಲೆಕ್ಕ ಪರಿಶೋಧಕರು ಉಪಸ್ಥಿತರಿದ್ದು, ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ಸಿಎ ಜಗದೀಶ್ ಬಿ. ಶೆಟ್ಟಿಕರ್ನಾಟಕ ಕರಾವಳಿಯ ಮಂಗಳೂರು ತಾಲ್ಲೂಕು ಸುರತ್ಕಲ್ ಚೊಕ್ಕಬೆಟ್ಟು-ಕಟ್ಲದ ರಾಧಾ ಹೆರಿಟೇಜ್‌ನ ಮಲ್ಲಮಾರ್ ಹೌಸ್ ಮೂಲತಃ ಭೋಜ ಶೆಟ್ಟಿ ಮತ್ತು ರಾಧಾ ಭೋಜ ಶೆಟ್ಟಿ ದಂಪತಿ ಸುಪುತ್ರರಾಗಿರುವ ಸಿಎ ಜಗದೀಶ್ ಬಿ. ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿನ ಪ್ರತಿಷ್ಠಿತ ಎಸ್.ಎನ್.ಎ. (ಶೆಟ್ಟಿ ನಾಯಕ್ ಅಂಡ್ ಅಸೋಸಿಯೇಟ್ಸ್) ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಸಂಸ್ಥಾಪಕ ಪಾಲುದಾರರಾಗಿದ್ದಾರೆ.

ಬಂಟ್ಸ್ ಸಂಘ ಮುಂಬೈ ಸಂಚಾಲಿತ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆ ಪೊವಾಯಿ ಇದರ ಗೌರವ ಕೋಶಾಧಿಕಾರಿಯಾಗಿ, ಬಂಟ್ಸ್ ಸಂಘದ ಬೋರಿವಲಿ ಶಿಕ್ಷಣ ಸಮಿತಿಯ ಗೌರವ ಕೋಶಾಧಿಕಾರಿಯಾಗಿ ಹಾಗೂ ಎಬಿಸಿಎ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಸ್ತುತ ಬಂಟ್ಸ್ ಸಂಘದ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ (ರಿ.) ಇದರ ವೃತ್ತಿಪರ ನಿರ್ದೇಶಕರಾಗಿ, ಬೋರಿವಲಿ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಡಬ್ಲ್ಯೂಜೆ) ಮಹಾರಾಷ್ಟ್ರ ರಾಜ್ಯ ಘಟಕದ ಸಲಹೆಗಾರರಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ (ಮುಂಬೈ ವಿಶ್ವವಿದ್ಯಾಲಯ) ವಾಣಿಜ್ಯ ಪದವಿ (ಬಿ.ಕಾಂ.) ಪಡೆದಿದ್ದು, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಇದರ ಫೆಲೋ ಸದಸ್ಯರಾಗಿದ್ದಾರೆ.

ಮಾಹಿತಿ ವ್ಯವಸ್ಥೆಗಳ ಆಡಿಟರ್ (DISA), ಕಾನೂನು ಪದವಿ (LL.B.) ಹಾಗೂ ಸರ್ಟಿಫೈಡ್ ಫೊರೆನ್ಸಿಕ್ ಆಡಿಟರ್ (FAFD-ICAI) ಅರ್ಹತೆಗಳನ್ನು ಪಡೆದಿದ್ದಾರೆ.ಕಳೆದ ಮೂರು ದಶಕಗಳಿಂದ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ವಜನಿಕ ಹಾಗೂ ಖಾಸಗಿ ಕಂಪನಿಗಳ ಮಂಡಳಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ವಿ ವಿ ಕಾಲೇಜು ಪ್ರಾಂಶುಪಾಲರಾಗಿ ಡಾ. ಜಯವಂತ ನಾಯಕ್:

voiceoftulunadu

ತೀರ್ಥಹಳ್ಳಿ ಮೂಲದ ಬರಹಗಾರರಾದ ಜಿ ಟಿ ನಂದೀಶ್ ಹೃದಯಾಘಾತದಿಂದ ನಿಧನ:

voiceoftulunadu

ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ ವಿರುದ್ಧ ನಡೆದ ದೊಡ್ಡ ಮಟ್ಟದ ಪಿತೂರಿ ; ಚಿನ್ನಯ್ಯನಿಂದ ರಿಟ್ಕರಾವಳಿ ಹಾಗೂ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ ಪ್ರಕಾಶ್ ರಾಜ್ ಹೆಸರು:

voiceoftulunadu

Leave a Comment