July 7, 2026
Uncategorizedಬ್ರೇಕಿಂಗ್ ನ್ಯೂಸ್ರಾಜಕೀಯರಾಜ್ಯ/ದೇಶ

ಕೇರಳ ಸಿಎಂ ಆಗಿ ವಿ.ಡಿ ಸತೀಶನ್‌, 20 ಸಂಪುಟ ಸಚಿವರಿಂದ ಇಂದು ಪ್ರಮಾಣ ಸ್ವೀಕಾರ|

ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ವಿ.ಡಿ ಸತೀಶನ್‌ (VD Satheesan) ಹಾಗೂ ಇತರ 20 ಮಂದಿ ಸಂಪುಟ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಪ್ರಮಾಣ ಸ್ವೀಕಾರ ಸಮಾರಂಭಕ್ಕೂ ಮುನ್ನವೇ ವಿ.ಡಿ ಸತೀಶನ್‌ ಭಾನುವಾರ (ನಿನ್ನೆ) ಯುಡಿಎಫ್ ಮೈತ್ರಿಕೂಟದ ಸಚಿವ ಸಂಪುಟವನ್ನ ಅನಾವರಣಗೊಳಿಸಿದರು. 21 ಸಚಿವರಲ್ಲಿ ಸತೀಶನ್ ಸೇರಿದಂತೆ 14 ಮಂದಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅಲ್ಲದೇ ಸಂಪುಟದಲ್ಲಿ (Kerala Cabinet) ಇಬ್ಬರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಸಮುದಾಯದ ಇಬ್ಬರು ಸದಸ್ಯರು ಸೇರಿದ್ದಾರೆ.ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಸಚಿವರ ಪಟ್ಟಿ ಸಲ್ಲಿಸಿದ ನಂತರ, ರಾಜ್ಯಪಾಲರು ಸರ್ಕಾರ ರಚನೆಗೆ ಅನುಮೋದನೆ ನೀಡಿದರು. ಇಡೀ ಯುಡಿಎಫ್ ಸಚಿವಾಲಯ ಇಂದು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಲಿದೆ.ಕಳೆದ

ಕಳೆದ 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಯುಡಿಎಫ್ ಸಂಪುಟ ಏಕಕಾಲದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ಇದಾಗಿದೆ.ಕಾಂಗ್ರೆಸ್‌ನ 11 ಶಾಸಕರಿಗೆ ಸಂಪುಟದಲ್ಲಿ ಸ್ಥಾನಇನ್ನೂ ಮುಖ್ಯಮಂತ್ರಿ ಹುದ್ದೆಯೊಂದಿಗೆ 11 ಮಂದಿ ಕಾಂಗ್ರೆಸ್‌ ಶಾಸಕರು ಕೇರಳ ನೂತನ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಐವರು,ಕೇರಳ ಕಾಂಗ್ರೆಸ್ (ಜೋಸೆಫ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ಕೇರಳ ಕಾಂಗ್ರೆಸ್ (ಜಾಕೋಬ್) ಮತ್ತು ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ (ಸಿಎಂಪಿ) ಗಳು ತಲಾ ಒಂದು ಸ್ಥಾನ ಪಡೆದಿವೆ.

ಸಚಿವರು ಯಾರ್ಯಾರು?ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ ಮುರಳೀಧರನ್, ಎ ಪಿ ಅನಿಲ್ ಕುಮಾರ್, ಪಿ.ಸಿ ವಿಷ್ಣುನಾಧ್, ಬಿಂಧು ಕೃಷ್ಣ, ಎಂ ಲಿಜ್ಜು, ಟಿ ಸಿದ್ದಿಕ್, ರೋಜಿ ಎಂ. ಜಾನ್, ಕೆ.ಎ ತುಳಸಿ ಮತ್ತು ಒ.ಜೆ ಜನೀಶ್ ಕಾಂಗ್ರೆಸ್ ಸಚಿವರಾಗಿದ್ದಾರೆ. ಜೊತೆಗೆ ಪಿ.ಕೆ ಕುನ್ಹಾಲಿಕುಟ್ಟಿ, ಕೆ.ಎಂ ಶಾಜಿ, ಎನ್ ಶಂಸುದ್ದೀನ್, ಪಿ.ಕೆ ಬಶೀರ್ ಮತ್ತು ವಿ.ಇ ಅಬ್ದುಲ್ ಗಫೂರ್. ಮಾನ್ಸ್ ಜೋಸೆಫ್ (ಕೆಸಿ-ಜೋಸೆಫ್), ಅನೂಪ್ ಜೇಕಬ್ (ಕೆಸಿ-ಜೇಕಬ್), ಶಿಬು ಬೇಬಿ ಜಾನ್ (ಆರ್‌ಎಸ್‌ಪಿ) ಮತ್ತು ಸಿಪಿ ಜಾನ್ (ಸಿಎಂಪಿ) ಇತರ ಸಚಿವರು ನಾಮನಿರ್ದೇಶನಗೊಂಡಿದ್ದಾರೆ.ಡಿಕೆಶಿ, ಖರ್ಗೆ ಕೇರಳಕ್ಕೆಇಂದು ಪ್ರಮಾಣ ಸ್ವೀಕಾರ ಸಮಾರಂಭದ ಹಿನ್ನೆಲೆ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಎಐಸಿಸಿ ಅಧ್ಯಕ್ಷ ಕೇರಳಕ್ಕೆ ತೆರಳಿದ್ದಾರೆ.

Related posts

ಸಾಂಪ್ರದಾಯಿಕ ನಾಟಿ ಮುಂದುವರಿಸುತ್ತಿರುವ ಯುವ ರೈತ ಹರೀಶ್ ಪೂಜಾರಿ ಕಿಶೋ‌ರ್ ಪೂಜಾರಿ : ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ಸದಸ್ಯರಿಂದ ಶ್ಲಾಘನೆ;

Voiceoftulunadu

ಪಡುಬಿದ್ರಿ ಕಡಲು ಕೊರೆತ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ ವಿ ಅಮೀನ್ ಮನವಿ: ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್;

Voiceoftulunadu

ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ₹80 ಸಾವಿರ ಕಳವು: 24 ಗಂಟೆಯೊಳಗೆ ಮೂವರು ಅಂತರ್ ಜಿಲ್ಲಾ ಕಳ್ಳಿಯರ ಬಂಧನ;

Voiceoftulunadu

Leave a Comment