27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯರಾಜಕೀಯರಾಜ್ಯ/ದೇಶವಾಣಿಜ್ಯ

ಪತ್ರಿಕಾ ದಿನಾಚರಣೆ-2026: ‘ಮಾಧ್ಯಮಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ’ – ಸಿಎಂ ಡಿಕೆ ಶಿವಕುಮಾರ್ ಕರೆ;

ವರದಿ /ಚಿತ್ರ:ವಿನೋದ್ ಶೆಟ್ಟಿ ಉಡುಪಿ

ಬೆಂಗಳೂರು:ನಗರದ ಗಾಂಧಿ ಭವನದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ *‘ಪತ್ರಿಕಾ ದಿನಾಚರಣೆ-2026’* ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಿಎಂ ಡಿಕೆ ಶಿವಕುಮಾರ್ ಮಾತು: ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರಿಗೆ ಶುಭ ಕೋರಿದ *ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್* ಅವರು, “ಮಾಧ್ಯಮಗಳು ಆಡಳಿತ ಪಕ್ಷವನ್ನು ಕೇವಲ ವಿರೋಧಿಸುವುದನ್ನೇ ಗುರಿಯಾಗಿಸಿಕೊಳ್ಳಬಾರದು. ಸಮಾಜದ ಕಣ್ಣು, ಕಿವಿ, ಮೂಗು ಆಗಿರುವ ಪತ್ರಕರ್ತರು ತಮ್ಮ *ಆತ್ಮಸಾಕ್ಷಿಗೆ ಅನುಗುಣವಾಗಿ, ನಿಷ್ಪಕ್ಷಪಾತವಾಗಿ ಸುದ್ದಿಗಳನ್ನು ಪ್ರಕಟಿಸಬೇಕು*” ಎಂದು ಕರೆ ನೀಡಿದರು.

ದಿನೇಶ್ ಗುಂಡೂರಾವ್ ಎಚ್ಚರಿಕೆ: ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಶಾಸಕ *ದಿನೇಶ್ ಗುಂಡೂರಾವ್* ಮಾತನಾಡಿ, “ಮಾಧ್ಯಮ ಯಾವುದೇ ಒತ್ತಡ, ಆಮಿಷ, ಬೆದರಿಕೆಗೆ ಮಣಿಯದೇ ಕೆಲಸ ಮಾಡಿದಾಗ ಮಾತ್ರ ವ್ಯವಸ್ಥೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ. ಕಳೆದ ಒಂದು ದಶಕದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೇಗವಾದ ಬದಲಾವಣೆಗಳಾಗಿವೆ. *ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಸಾಂಪ್ರದಾಯಿಕ ಮಾಧ್ಯಮಕ್ಕೆ ದೊಡ್ಡ ಸವಾಲು ಎದುರಾಗಿದೆ*. ನಕಲಿ ಸುದ್ದಿಗಳ ಹಾವಳಿಯಿಂದ ಸಾರ್ವಜನಿಕರು ನಿಜವಾದ ಸುದ್ದಿಯನ್ನು ತಿಳಿದುಕೊಳ್ಳುವುದು ಕಷ್ಟವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು. ವಿಚಾರಸಂಕಿರಣದ

ವಿಚಾರ ಸಂಕೀರ್ಣದ ಕಿಚ್ಚು: ಪತ್ರಿಕಾ ದಿನಾಚರಣೆಯ ಅಂಗವಾಗಿ ಡಿಜಿಟಲ್ ಯುಗದಲ್ಲಿ ನೈಜ ಪತ್ರಕರ್ತರು ಯಾರು?’* ಎಂಬ ವಿಷಯದ ಕುರಿತು ವಿಚಾರಸಂಕಿರಣ ನಡೆಯಿತು. ಹಿರಿಯ ಪತ್ರಕರ್ತ *ಅಬ್ದುಸ್ಸಲಾಂ ಪುತ್ತಿಗೆ* ಮತ್ತು ತೆಲಂಗಾಣ ಮಾಧ್ಯಮ ಅಕಾಡೆಮಿ ಅಧ್ಯಕ್ಷ *ಕೆ. ಶ್ರೀನಿವಾಸ ರೆಡ್ಡಿ* ಪ್ರಧಾನ ಭಾಷಣ ಮಾಡಿ, ಡಿಜಿಟಲ್ ಮಾಧ್ಯಮದ ಅವಕಾಶ ಮತ್ತು ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದರು.

ಮಾಧ್ಯಮ ಕಿಟ್ ವಿತರಣೆ: ಇದೇ ಸಂದರ್ಭದಲ್ಲಿ ವೃತ್ತಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಆಯ್ದ ಪತ್ರಕರ್ತರಿಗೆ *ಮಾಧ್ಯಮ ಕಿಟ್‌ಗಳನ್ನು* ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.

ಗಣ್ಯರ ದಂಡು: ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ *ಆಯೇಷಾ ಖಾನಂ*, ವಾರ್ತಾ ಇಲಾಖೆಯ ಆಯುಕ್ತ *ಎಂ.ಎನ್. ಅನುಚೇತ್*, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ *ಶಿವಾನಂದ ತಗಡೂರು*, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ *ಡಾ. ಆರ್. ಪೂರ್ಣಿಮಾ*, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ *ವೋಡೇ ಪಿ. ಕೃಷ್ಣ*, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ *ಪುರುಷೋತ್ತಮ ಬಿಳಿಮಲೆ*, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ *ಸಹನಾ ಎಂ.* ಸೇರಿದಂತೆ ಹಲವು ಗಣ್ಯರು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

Related posts

ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕದ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ: ಉಚ್ಚಿಲ ಸರಸ್ವತಿ ಮಂದಿರ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕೋಪಕರಣ ವಿತರಣೆ ;

Voiceoftulunadu

ಸಿ ಎಲ್ ಪಿ (CLP) ನೂತನ ನಾಯಕರಾಗಿ ಡಿ. ಕೆ. ಶಿವಕುಮಾರ್ ಆಯ್ಕೆ

Voiceoftulunadu

ಹಾವಂಜೆ ಕೊರಗಜ್ಜ ದೈವಸ್ಥಾನದಲ್ಲಿ ವಿಜೃಂಭಣೆಯ ಹರಕೆ ಕೋಲ ಸೇವೆ : ಸಾವಿರಾರು ಭಕ್ತರ ಸಮ್ಮುಖದಲ್ಲಿ ದೈವಾರಾಧನೆಯ ಸಂಭ್ರಮ;

Voiceoftulunadu

Leave a Comment