September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಮಂಗಳೂರು ವಲಯ ತುಳುವ ಮಹಾಸಭೆಯ ನೂತನ ಅಧ್ಯಕ್ಷರಾಗಿ ಉದ್ಯಮಿ ಕಿಶೋರ್ ಡಿ ಶೆಟ್ಟಿ ಅಧಿಕೃತವಾಗಿ ನೇಮಕ;

ಮಂಗಳೂರು: ಕರಾವಳಿಯಸಾಂಸ್ಕೃತಿಕ ಲೋಕದ ಪ್ರಮುಖ ಧ್ರುವತಾರೆ, ಖ್ಯಾತ ನಿರ್ದೇಶಕ, ಸಂ ಘಟಕ ಹಾಗೂ ಉದ್ಯಮಿ ಕಿಶೋರ್ ಡಿ ಶೆಟ್ಟಿ ಅವರನ್ನು ಮಂಗಳೂರು ವಲಯ ತುಳುವ ಮಹಾಸಭೆಯ ಅಧ್ಯಕ್ಷರಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ. ತುಳು ಭಾಷೆ, ಕಲೆ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಇವರು ನೀಡಿರುವ ದೀರ್ಘಕಾಲದ ಕೊಡುಗೆ ಮತ್ತು ಸಾಂಸ್ಕೃತಿಕ ಅಸ್ತಿತ್ವಕ್ಕೆ ಈ ಮಹತ್ವದ ಜವಾಬ್ದಾರಿಯು ಮತ್ತೊಂದು ಗರಿಮೆ ತಂದುಕೊಟ್ಟಿದೆ.

ಈಗಾಗಲೇ ತುಳು ನಾಟಕ ಕಲಾವಿದರ ಒಕ್ಕೂಟದ ಸಾರಥ್ಯ ವಹಿಸಿ ಕಲಾವಿದರ ಹಿತಾಸಕ್ತಿ, ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಬಂದಿರುವ ಇವರು, ಕರಾವಳಿಯ ದೃಢವಾದ ಸಾಂಸ್ಕೃತಿಕ ಸಂಘಟನಾ ಶಕ್ತಿಯಾಗಿದ್ದಾರೆ.

ರಂಗಭೂಮಿಯನ್ನು ವೃತ್ತಿಪರ ಹಾಗೂ ಜನಪರ ನೆಲೆಗೆ ಕೊಂಡೊಯ್ಯುವಲ್ಲಿ ಇವರ ಪಾತ್ರ ಅನನ್ಯ. ಪ್ರಸಿದ್ದ ಲಕುಮಿ ಸಾಂಸ್ಕೃತಿಕ ತಂಡದ ರೂವಾರಿಯಾಗಿ ನೂರಾರು ಯಶಸ್ವಿ ಪ್ರಯೋಗಗಳನ್ನು ನೀಡಿರುವ ಇವರು, ಕರಾವಳಿಯ ಅದೆಷ್ಟೋ ರಂಗ ಪ್ರತಿಭಾವಂತ ಕಲಾವಿದರಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜಮುಖಿ ಕಲೆಗಳ ಮೂಲಕ ಕರಾವಳಿಯ ಬದುಕಿನ ನೈಜ ಸಾಂಸ್ಕೃತಿಕಮೌಲ್ಯಗಳನ್ನು ಬಿಂಬಿಸುವಲ್ಲಿ ಇವರ ಹಾಗೂ ನಾಯಕತ್ವ ಗುಣವು, ನಿರ್ದೇಶನ ಮತ್ತು ದೃಷ್ಟಿಕೋನ ಮಂಗಳೂರು ವಲಯ ತುಳುವ ಯಶಸ್ವಿಯಾಗಿದೆ.

ಮಹಾಸಭೆಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ಕಲೆ ಮತ್ತು ಭಾಷೆಯ ಮತ್ತಷ್ಟು ಉಳಿವಿಗಾಗಿ ನಿರಂತರವಾಗಿ ತುಳುನಾಡಿನ ಪರಂಪರೆಗೆ ಹೊಸ ಶ್ರಮಿಸುತ್ತಿರುವ ಇವರ ಅಸ್ತಿತ್ವ ಬಲ ತುಂಬಲಿದೆ.

Related posts

ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು,ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆ;

Voiceoftulunadu

ಹಿಂದೂಗಳ ಧ್ವನಿ ಅಡಗಿಸುವ ಪ್ರಯತ್ನ ಖಂಡನೀಯ : ರಮಿತಾ ಸೂರ್ಯವಂಶಿ : ಪಂಜಿನ ಮೆರವಣಿಗೆಗೆ ಪುನೀತ್ ಅತ್ತಾವರ, ನರಸಿಂಹ ಮಾಣಿಯವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ;

Voiceoftulunadu

ಪಡುಬಿದ್ರಿ ಬಿಲ್ಲವ ಸಂಘದಲ್ಲಿಆಟಿಡೊಂಜಿ ದಿನ ಕಾರ್ಯಕ್ರಮಚೆನ್ನೆ ಮಣೆ ಆಟ ಆಡುವ ಮೂಲಕ ಉದ್ಘಾಟನೆ ನೆರವೇರಿಸಿದ ಪಿ.ಕೆ. ಸದಾನಂದ, ವೈ ಸುಧೀರ್ ಕುಮಾರ್

Voiceoftulunadu

Leave a Comment