September 5, 2026
Uncategorizedಜಿಲ್ಲಾ ಸುದ್ದಿರಾಜಕೀಯಸ್ಥಳೀಯ/ಪ್ರಾದೇಶಿಕ ಸುದ್ದಿ

ಮುದರಂಗಡಿ ಎಸ್ ಐ ಆರ್ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ;

ವರದಿ /ಚಿತ್ರ: ಇ ಮೀಡಿಯಾ

ಮುದರಂಗಡಿ:ಕೆಥೊಲಿಕ್ ಸಭಾ, ಕೆಥೊಲಿಕ್ ಸ್ತ್ರೀ ಸಂಘಟನೆ ಮತ್ತು ಜನನಿ ಮಹಾಸಂಘದ ವತಿಯಿಂದ ಮುದರಂಗಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನ ಸಭಾಭವನದಲ್ಲಿ ಎಸ್ ಐ ಆರ್ ಬಗ್ಗೆ ಮಾಹಿತಿ ಕಾರ್ಯಾಗಾರ ಹಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉದ್ಘಾಟಿಸಿದರು.

ಅವರು ಮಾತನಾಡಿ,ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಚಿಂತಕ ಪ್ರೊ. ಕೆ ಫಣಿರಾಜ್ ರವರು ಎಸ್ ಐ ಆರ್ ಎಂದರೇನು? ಯಾವ ಕಾರಣಕ್ಕಾಗಿ ಈ ಪ್ರಕ್ರಿಯೆ ನಡೆಯುತ್ತಿದೆ? ಮತ ದಾರರ ಪಟ್ಟಿಯಲ್ಲಿ ಕೈಬಿಡಲಾದ ಹೆಸರುಗಳ ಸೇರ್ಪಡೆ ಹೇಗೆ? ಎಂಬ ಮಾಹಿತಿ ನೀಡಿ, ಇದಕ್ಕೆ ಬೇಕಾದ ದಾಖಲೆಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿ ದರು.

ಸಂದರ್ಭ ಸ್ಥಳೀಯ ಚರ್ಚಿನ ಧರ್ಮಗುರು ರೆ. ಫಾ. ವಿನ್ಸೆಂಟ್ ಕುವೆಲ್ಲೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಲೂಸಿ ಡಿಸೋಜಾ, ಕಾರ್ಯ ದರ್ಶಿ ವಿಜಯಾ ಮತಾಯಸ್, ಕೆಥೊಲಿಕ್ ಸಭಾದ ಅಧ್ಯಕ್ಷ ಸುನೀಲ್ ಡಿಸೋಜಾ, ಜನನಿ ಮಹಾಸಂಘದ ಅಧ್ಯಕ್ಷೆ ಪ್ರಮೋದ ಮತಾಯಸ್, ಕೆಥೊಲಿಕ್ ಸಭಾ ಶಿರ್ವಾ ವಲಯದ ಅಧ್ಯಕ್ಷ ಜೆರಾಲ್ಡ್ ರೋಡ್ರಿಗಸ್ ಉಪಸ್ಥಿತರಿದ್ದರು.

Related posts

ಸಂಗೀತ ಸಾಮ್ರಾಟ್’ ಹೆನ್ರಿ ಡಿ’ಸೋಜಾ ನಿಧನ ;

Voiceoftulunadu

ವಿ ವಿ ಕಾಲೇಜು ಪ್ರಾಂಶುಪಾಲರಾಗಿ ಡಾ. ಜಯವಂತ ನಾಯಕ್:

voiceoftulunadu

ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಆಶಾಕಿರಣ: ಉಡುಪಿ ಜಿಲ್ಲೆಗೆ 100 ಜ್ಞಾನ ದೀಪ ಶಿಕ್ಷಕರು ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಜ್ಞಾನ ದೀಪ ಯೋಜನೆ;

Voiceoftulunadu

Leave a Comment