27 C
ಮಂಗಳೂರು
July 6, 2026
ಆರೋಗ್ಯಉದ್ಯೋಗ/ಶಿಕ್ಷಣಕ್ರೀಡೆರಾಜಕೀಯರಾಜ್ಯ/ದೇಶವಿಶೇಷ ಅಂಕಣ

ಯೋಗ ದಿನಾಚರಣೆ| ಯೋಗವು ಕೇವಲ ದೈಹಿಕ ಕಸರತ್ತಲ್ಲ, ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿ: ಮೋದಿ;

ಕೋಲ್ಕತ್ತಾ: ಯೋಗವು (Yoga) ಕೇವಲ ದೈಹಿಕ ಕಸರತ್ತಲ್ಲ ಅಥವಾ ಇದು ಯಾವುದೇ ನಿರ್ದಿಷ್ಟ ವಯೋಮಾನದವರಿಗೆ ಸೀಮಿತವಾಗಿಲ್ಲ. ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

ಕೋಲ್ಕತ್ತಾದ(Kolkata) ಐತಿಹಾಸಿಕ ‘ರೆಡ್ ರೋಡ್‌’ನಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ(International Yoga Day Celebrations) ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೂನ್ 21 ಭೂಮಿಯ ಮೇಲಿನ ಸುದೀರ್ಘ ದಿನವಾಗಿದೆ. ಆದರೆ ಈಗ ಯೋಗದ ಕಾರಣದಿಂದಾಗಿ ಇದು ವಿಶ್ವದ ಅತಿ ಹೆಚ್ಚು ಜನ ಭಾಗವಹಿಸುವ ಆಚರಣೆಯ ದಿನವಾಗಿ ಮಾರ್ಪಟ್ಟಿದೆ ಎಂದರು.ವಿಶ್ವವು ಇಂದು ಒಂದಕ್ಕೊಂದು ಬೆಸೆದುಕೊಂಡಿರುವಂತೆ ಕಾಣುತ್ತಿದೆ. ಇದುವೇ ಯೋಗದ ಶಕ್ತಿ.

ಯೋಗವು ಪ್ರತಿಯೊಬ್ಬರನ್ನೂ ಜೋಡಿಸುತ್ತದೆ, ಎಲ್ಲರನ್ನೂ ಒಟ್ಟಿಗೆ ತರುತ್ತದೆ. ಈ ಶುಭ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾನು ಇಡೀ ಜಗತ್ತಿಗೆ ಹಾಗೂ ಇಡೀ ಮಾನವ ಕುಲಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಇಂದು ಯೋಗ ದಿನದಂದು, ವಿಶೇಷವಾಗಿ ಬಂಗಾಳದ ಜನತೆ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಇದು ಅತ್ಯಂತ ಅದ್ಭುತವಾದ ಉಪಕ್ರಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಅವರೊಂದಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಒಟ್ಟಿಗೆ ಯೋಗಾಭ್ಯಾಸ ಮಾಡಿದರು. ಕೋಲ್ಕತ್ತಾದ ಹೂಗ್ಲಿ ನದಿಯ ‘ಬಾಬು ಘಾಟ್’ ಬಳಿ ಸುಂದರಬನ್ಸ್ ಸೇರಿದಂತೆ ವಿವಿಧ ಭಾಗಗಳಿಂದ ಬಂದ 500ಕ್ಕೂ ಹೆಚ್ಚು ಬೋಟ್‌ಗಳ (ದೋಣಿಗಳು) ಮೇಲೆ ಯೋಗಪಟುಗಳು ಏಕಕಾಲದಲ್ಲಿ ಯೋಗಾಸನ ಪ್ರದರ್ಶಿಸಿದರು.ಕೇವಲ ರೆಡ್ ರೋಡ್ ಮಾತ್ರವಲ್ಲದೆ, ಕೋಲ್ಕತ್ತಾದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲೂ ಯೋಗ ಕೇಂದ್ರಗಳನ್ನು ತೆರೆಯಲಾಗಿತ್ತು. ವಿಕ್ಟೋರಿಯಾ ಮೆಮೋರಿಯಲ್ ಆವರಣ, ಹೌರಾ ಸೇತುವೆಯ ಆಯ್ದ ಭಾಗಗಳು, ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಆವರಣಈ ಎಲ್ಲಾ ಸ್ಥಳಗಳಲ್ಲಿ ಬೆಳಿಗ್ಗೆ ಏಕಕಾಲದಲ್ಲಿ ಹೂವಿನ ಅಲಂಕಾರಗಳ ನಡುವೆ ಸಹಸ್ರಾರು ಜನರು ಯೋಗ ಮಾಡಿದರು.

ಈ ಬಾರಿಯ ಯೋಗ ದಿನಾಚರಣೆಯನ್ನು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ (Yoga for Healthy Ageing)ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಯಸ್ಸಾದಂತೆ ದೈಹಿಕ ಫಿಟ್‌ನೆಸ್, ಮಾನಸಿಕ ಸಮತೋಲನ ಮತ್ತು ಸಕ್ರಿಯ ಜೀವನವನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರವನ್ನು ಈ ವರ್ಷದ ಥೀಮ್ ಎತ್ತಿ ತೋರಿಸುತ್ತದೆ.

Related posts

ಸಾಧನೆಯ ಶಿಖರಕ್ಕೇರಿದ ಕರಾವಳಿಯ ಹೆಮ್ಮೆಯ ಕುವರಿ: ನೈಜ ಹೆಗ್ಡೆ ಕನಸಿನ ಪಯಣ;

Voiceoftulunadu

ಆಸಕ್ತಿ ಮತ್ತು ವೃತ್ತಿಯ ನಡುವೆ ಸಮತೋಲನ ಅಗತ್ಯ: ಯುವಜನತೆಗೆ ನಮೃತಾ ಮೋಹನ್ ಕಿವಿಮಾತು:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಹಮ್ಮಿಕೊಂಡ ಕಾರ್ಯಕ್ರಮ;

Voiceoftulunadu

ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಜಯಶೀಲ ಅಡ್ಯಾಂತಾಯ ಅಡ್ಯಾರ್‌ಗುತ್ತು ಆಯ್ಕೆ;

Voiceoftulunadu

Leave a Comment