ವರದಿ /ಚಿತ್ರ :ಈ ಮೀಡಿಯಾ
ಹೆಜಮಾಡಿ: ಹೆಜಮಾಡಿ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋವೊಂದು ಹೊತ್ತಿ ಉರಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಮಂಗಳೂರಿನಿಂದ ಉಡುಪಿ ಕಡೆ ಬಾಳೆಹಣ್ಣು ಹೇರಿಕೊಂಡು ಸಾಗುತ್ತಿದ್ದ ಟೆಂಪೋ, ಹೆಜಮಾಡಿ ಟೋಲ್ ಗೇಟ್ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಡೀಸೆಲ್ ತುಂಬಿಸಿ 200 ಮೀಟರ್ ದೂರ ಸಾಗಿ ನಿಂತಾಗ ಟೆಂಪೋದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯ ತೀವ್ರತೆಗೆ ಟೆಂಪೋ ಸಂಪೂರ್ಣ ವಾಗಿ ಭಸ್ಮವಾಗಿದೆ.ಹೆಜಮಾಡಿ ಟೋಲ್ ಗೇಟಿನ ರೂಟ್ ಪೆಟ್ರೋಲಿಂಗ್ ತಂಡದ ಮುಖ್ಯಸ್ಥ ಶೈಲೇಶ್ ಶೆಟ್ಟಿ ಮತ್ತು ಅವರ ತಂಡ, ಪೆಟ್ರೋಲ್ ಪಂಪ್ ಸಿಬ್ಬಂದಿ ತುರ್ತಾಗಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದೆ.
ಯುಪಿಸಿಎಲ್ ಅದಾನಿ ಸಂಸ್ಥೆಯ ಅಗ್ನಿಶಾಮಕ ವಾಹನವೂ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದೆ. ಅದಾಗಿಯೂ ಟೆಂಪೋ ಉರಿದು ಭಸ್ಮವಾಗಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
