ವರದಿ/ ಚಿತ್ರ:ಇ ಮೀಡಿಯಾ
ಎರ್ಮಾಳು : ಎರ್ಮಾಳು ಶ್ರೀನಿಧಿ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಸಾರ್ವತ್ರಿಕ ಕಾರ್ಯಕ್ರಮ ಭಾನುವಾರ ನೆರವೇರಿತು.ಮಕ್ಕಳ ಪೋಷಕರು ಮಕ್ಕಳೊಂದಿಗೆ ಕೇಂದ್ರಕ್ಕೆ ಆಗಮಿಸಿ ಮಕ್ಕಳಿಗೆ ಲಸಿಕೆ ಪಡೆದರು.ತಾಲೂಕು ಅಧಿಕಾರಿಗಳ ಕಛೇರಿ ಉಡುಪಿ ಇದರ ರಾಷ್ಟ್ರೀಯ ಬಾಲ ಸಂಸ್ಥೆಯ ಅಧಿಕಾರಿಗಳು ಈ ಸಂದರ್ಭಉಪಸ್ಥಿತರಿದ್ದರು.
ಈ ಸಂದರ್ಭ ಪಡುಬಿದ್ರಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ರಾಜಶ್ರೀ ಕಿಣಿ, ಸಿಸ್ಟರ್ ಮಮತಾ ಶೆಟ್ಟಿ,ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಶಶಿಕಲಾ, ಶ್ರೀಮತಿ ಲಕ್ಷ್ಮೀ, ಆಶಾ ಕಾರ್ಯಕತೆಯರಾದ ಶ್ರೀಮತಿ ಗೀತಾ ಬಾಲಕೃಷ್ಣ, ಶ್ರೀಮತಿ ಶರ್ಮಿಲಾ ಮತ್ತಿತರರು ಉಪಸ್ಥಿತರಿದ್ದರು.
