September 5, 2026
Uncategorizedಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕಟಪಾಡಿಯಲ್ಲಿ ನಡೆದ ಆಟಿದ ಅಟ್ಟಣೆ ಕಾರ್ಯಕ್ರಮ: ತುಳುನಾಡಿನಲ್ಲಿ ಆಟಿ ತಿಂಗಳೆಂದರೆ ನಂಬಿಕೆಯ ತಿಂಗಳಾಗಿದೆ : ದಯಾನಂದ ಕೆ. ಶೆಟ್ಟಿ ದೆಂದೂರು ;

ವರದಿ/ ಚಿತ್ರ: ಈ ಮೀಡಿಯಾ

ಕಟಪಾಡಿ : ತುಳುನಾಡಿನಲ್ಲಿ ಆಟ ತಿಂಗಳೆಂದರೆ ನಂಬಿಕೆಯ ತಿಂಗಳಾಗಿದೆ. ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ತಿಂಗಳು ಪ್ರಕೃತಿದತ್ತವಾದ ಔಷಧೀಯ ಗುಣವುಳ್ಳ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದರು ಎಂದು ಜಾನಪದ ವಿದ್ವಾಂಸ ದಯಾನಂದ ಕೆ.ಶೆಟ್ಟಿ ದೆಂದೂರು ತಿಳಿಸಿದ್ದಾರೆ.

ಕಟಪಾಡಿ ಎಸ್‌ವಿಎಸ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಟಿ ತಿಂಗಳ ಸಂಪ್ರದಾಯ, ಆಹಾರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಎಸ್ ವಿ ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಆಟಿದ ಅಟ್ಟಣೆ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಉಪನ್ಯಾಸ ನೀಡಿದರು.

ಕೃಷಿ ಬದುಕಿನೊಂದಿಗೆ ಸಮ್ಮಿಳಿತವಾಗಿದ್ದ ತುಳುವರ ಜನಜೀವನ ಕಷ್ಟಕರವಾಗಿದ್ದರೂ ಕೂಡಾ ade ವರ್ಷಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಆಟಿ ತಿಂಗಳ ಬಿಡುವಿನ ವೇಳೆಯಲ್ಲಿ ಮಾಡಿಕೊಳ್ಳುತ್ತಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿಗಳು ಸೇರಿ ಆಟಿಯ ಅಟ್ಟಣೆ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ ಎಂದರು.

ಕಟಪಾಡಿಯ ವೈದ್ಯ ಡಾ.ಯು ಕೆ. ಶೆಟ್ಟಿ ಅವರು ಹಿರಿಯರಿಗೆ ಆಟಿಯ ಅಡುಗೆ ಬಡಿಸಿ, ತುಡರ್ ಹಚ್ಚಿ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಟಪಾಡಿ ಎಸ್‌ವಿಎಸ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಪ್ರಭಾ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಕಾಮತ್, ಕಲಾಕಾರ್ಯದರ್ಶಿ ಪ್ರಶಾಂತ್ ಆರ್.ಎಸ್, ನಿಕಟಪೂರ್ವ ಕೋಶಾಧಿಕಾರಿ ಮಹೇಶ್ ಎನ್.ಅಂಚನ್, ನಾಟಕ ಕಲಾವಿದ ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.

ಹಳೆವಿದ್ಯಾರ್ಥಿ ಸಂಘದ ಸದಸ್ಯ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಎನ್‌.ಜಿ. ಸುಕುಮಾರ್ ವಂದಿಸಿದರು.

ಹಳೆ ವಿದ್ಯಾರ್ಥಿಗಳು ತಯಾರಿಸಿರುವ 40 ಕ್ಕೂ ಅಧಿಕ ಬಗೆಯ ಆಟಿಯ ತಿಂಡಿ ತಿನಸುಗಳ ಖಾದ್ಯ ವೈವಿಧ್ಯ ಪ್ರದರ್ಶನ, ಸಹಭೋಜನ, ಔಷಧೀಯ ಸಸ್ಯಗಳ ಪ್ರದರ್ಶನ ಹಾಗೂ ವಿವಿಧ ಮನೋರಂಜನಾ ಜನಪದ ಆಟೋಟ ಸ್ಪರ್ಧೆಗಳು ನಡೆದವು.

Related posts

ಮೇ 24 ರಂದು ಮುಲ್ಕಿಯಲ್ಲಿ ಕೋಸ್ಟಲ್ ಫಿಲಂ ಅವಾಡ್ಸ್೯ 2026

voiceoftulunadu

ಕಂಬಳಕ್ಕೆ ವಿಶೇಷ ಸ್ಥಾನಮಾನ: ಸಿಎಂ ಡಿಕೆಶಿ ವಾರ್ಷಿಕ 5 ಕೋಟಿ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಭರವಸೆ ;

Voiceoftulunadu

ನೇತ್ರಾವತಿ ಜಲಾನಯನ ಪ್ರದೇಶದ ಕೃಷಿ ಹಳ್ಳದಲ್ಲಿ ಜಲನಾಯಿಗಳ ಹಿಂಡು ಪತ್ತೆ;

Voiceoftulunadu

Leave a Comment