28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿವಾಣಿಜ್ಯಸ್ಥಳೀಯ/ಪ್ರಾದೇಶಿಕ ಸುದ್ದಿ

ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸಲಿದೆ: ಪ್ರಭಾಕರ ಪ್ರಭು.

ಬಂಟ್ವಾಳ :ಹಣಕಾಸು ವಹಿವಾಟು ನಡೆಸುವ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು ತಮ್ಮ ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸಲಿದ್ದು, ಇದರಿಂದ ಗ್ರಾಹಕರು ಬ್ಯಾಂಕ್ ನೊಂದಿಗೆ ಮತ್ತಷ್ಟು ಸಂಬಂಧ ವೃದ್ಧಿಸಲು ಸಹಕಾರಿ ಯಾಗುತ್ತದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಇತ್ತೀಚಿಗೆ ವರ್ಗಾವಣೆಗೊಂಡ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿದ್ದಕಟ್ಟೆ ಶಾಖೆಯ ಶಾಖಾಧಿಕಾರಿ ರಘುಪ್ರಸಾದ್, ಹಾಗೂ ಬ್ಯಾಂಕ್ ಸಿಬ್ಬಂದಿ ಸ್ಮಿತಾರವರನ್ನು ಗೌರವಿಸಿ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ರಘುಪ್ರಸಾದ್ ಮಾತನಾಡಿ ಸಿದ್ದಕಟ್ಟೆ ಪರಿಸರದ ಗ್ರಾಹಕರು ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸದಾಯಕರಾಗಿದ್ದು, ಸಿದ್ದಕಟ್ಟೆಯ ವಾತಾವರಣವುಹಣಕಾಸು ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.ಸಮಾರಂಭದಲ್ಲಿ ಸಿದ್ದಕಟ್ಟೆಯ ಸ್ವಾಗತ ಕಾಂಪ್ಲೆಕ್ಸ್ ಮಾಲಕರರಾದ ಹರೀಶ್ ಶೆಟ್ಟಿ, ಬ್ಯಾಂಕ್ ಸಿಬ್ಬಂದಿ ಮಂಜುನಾಥ್, ಪದ್ಮಾವತಿ,ಉದ್ಯಮಿಗಳಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು,ಯೋಗೀಶ್ ಶೆಟ್ಟಿಗಾರ್, ಪ್ರಮುಖರಾದ ಸಂತೋಷ, ಕೇಶವ ಶಭರೀಶ ,ಪ್ರಕಾಶ್ ಶೆಟ್ಟಿ, ಗಣೇಶ್ ಹೊಳ್ಳ,ಸಂದ್ಯಾ ವಾರಿಜ, ಮೀನಾಕ್ಷಿ ಮತ್ತಿತರರ ಗ್ರಾಹಕರು ಉಪಸ್ಥಿತರಿದ್ದರು.

Related posts

ಉಡುಪಿಯ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ” ಕೃತಿ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ : ಪ್ರಶಸ್ತಿ ಪ್ರದಾನಿಸಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್‌ ಹನಗವಾಡಿ;

Voiceoftulunadu

ವೇಳ್ ಘಡಿ’ ಕೊಂಕಣಿ ಸಿನಿಮಾಕ್ಕೆ ಮುಹೂರ್ತ* ಸಿನಿಮಾ ಮನರಂಜನೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡಲಿ : ಫಾ. ಓಸ್ವಾಲ್ಡ್ ಮೊಂತೇರೋ;

Voiceoftulunadu

ಆ.09: ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದಲ್ಲಿತುಳುನಾಡಿನ ಮರೆಯಾಗುತ್ತಿರುವ ಸಂಸ್ಕೃತಿ-ಸಂಪ್ರದಾಯದ ವಿಚಾರ ಸಂಕಿರಣ ;

Voiceoftulunadu

Leave a Comment