September 5, 2026
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಣಿಪಾಲ ಕೆಎಂಸಿಯಲ್ಲಿ ಪ್ರಣವ್ ಹೆಗ್ಡೆ ಕುಟುಂಬದಿಂದ ಅಂಗಾಂಗ ದಾನ, ಹಲವರಿಗೆ ಜೀವದಾನ ಪ್ರಣವ್‌ ಹೆಗ್ಡೆ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ;

ಮಣಿಪಾಲ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲದ 41 ವರ್ಷದ ಪ್ರಣವ್ ಹೆಗ್ಡೆ ಅವರನ್ನು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ ಬಳಿಕ, ಅವರ ಕುಟುಂಬ ಅಂಗಾಂಗಗಳನ್ನು ದಾನ ಮಾಡಿ ಹಲವು ರೋಗಿಗಳಿಗೆ ಹೊಸ ಬದುಕು ನೀಡಿದೆ.ಬಳಿಕ ಪ್ರಣವ್ ಹೆಗ್ಡೆ ಅವರನ್ನು ಆಗಸ್ಟ್ 17 ರಂದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರ ಆರೋಗ್ಯ ಸುಧಾರಿಸಲಿಲ್ಲ. ಅವರನ್ನು ಮೆದುಳು ೨ ನಿಷ್ಕ್ರಿಯ ನಿಷ್ಕ್ರಿಯ (ಬೈನ್ ಡೆಡ್) ಎಂದು ಘೋಷಿಸಲಾಯಿತು. ಮಾನವ ಅಂಗಾಂಗ ಕಸಿ ಕಾಯಿದೆ, 1994ರ ಪ್ರಕಾರ, ಅಧಿಕೃತ ತಜ್ಞ ವೈದ್ಯರ ತಂಡ ಎರಡು ಬಾರಿ ಮೆದುಳು ನಿಷ್ಕ್ರಿಯತೆಯನ್ನು ಖಚಿತಪಡಿಸಿತು.ಇದರ ಬಳಿಕ ಪ್ರಣವ್ ಹೆಗ್ಡೆ ಸ್ವಇಚ್ಛೆಯಿಂದ ಕುಟುಂಬದವರುಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.

ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ, ಇತರರಿಗೆ ಜೀವ ನೀಡುವ ಅವರ ಈ ನಿರ್ಧಾರ ಅಪರೂಪದ ಧೈರ್ಯ ಮತ್ತು ದೊಡ್ಡ ಮನಸ್ಸನ್ನು ತೋರಿಸಿದೆ.ಜೀವಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO), ಬೆಂಗಳೂರು ಇವರ ಸಮನ್ವಯದೊಂದಿಗೆ ಅಂಗಾಂಗಗಳನ್ನು ಹಂಚಿಕೆ ಮಾಡಲಾಯಿತು. ಯಕೃತ್ ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ 2.2. ಆಸ್ಪತ್ರೆಗೆ ಕಳುಹಿಸಲಾಯಿತು.

ಕಣ್ಣಿನ ಪೊರೆಗಳನ್ನು (ಕಾರ್ನಿಯಾ) ಅತ್ತಾವರದ ಕೆ.ಎಂ.ಸಿ.ಗೆ ನೀಡಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆ ಒಂದು ಮೂತ್ರಪಿಂಡವನ್ನು ಉಳಿಸಿಕೊಂಡಿತು.ಮುಖ್ಯ ಮಾಹೆ ಟೀಚಿಂಗ್ ಆಸ್ಪತ್ರೆಗಳ ಕಾರ್ಯನಿರ್ವಹಣಾಧಿಕಾರಿಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಕುಟುಂಬದ ನಿರ್ಧಾರವನ್ನು ಶ್ಲಾಘಿಸಿ, ಜೀವ ಉಳಿಸುವಲ್ಲಿ ಅಂಗಾಂಗ ದಾನದ ಮಹತ್ವವನ್ನು ವಿವರಿಸಿದರು.

“ಅಂಗಾಂಗ ದಾನ ಒಬ್ಬರು ಇನ್ನೊಬ್ಬರಿಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆ. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಪ್ರಣವ್ ಹೆಗ್ಡೆ ಅವರ ಕುಟುಂಬ ಇತರರಿಗೆ ಜೀವ ನೀಡುವ ನಿರ್ಧಾರ ಕೈಗೊಂಡು ಅಪಾರ ಧೈರ್ಯ ತೋರಿದೆ. ಈ ಶ್ರೇಷ್ಠ ಕಾರ್ಯಕ್ಕಾಗಿ ನಾವು ಕುಟುಂಬಕ್ಕೆ ಹೃತೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ಅವರು ತಿಳಿಸಿದರು.ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಭರವಸೆ ಮೂಡಿಸಿದ ಪ್ರಣವ್ ಹೆಗ್ಡೆ ಅವರ ಕುಟುಂಬದ ಈ ಉದಾರ ನಡೆಗೆ ಆಸ್ಪತ್ರೆ ಹೃತ್ತೂರ್ವಕ ಕೃತಜ್ಞತೆ ಸಲ್ಲಿಸಿದೆ.

Related posts

ಕರಾವಳಿಯಲ್ಲಿ ಸೈಲೆಂಟ್ ತಂಪ್: ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಇವಿ ಬೈಕ್ ವಿತರಣೆ ಆರಂಭ; ಶೀಘ್ರದಲ್ಲೇ ಮಂಗಳೂರಿಗೆ ‘ಫ್ಲೈಯಿಂಗ್ ಫ್ಲೀ C6’ ಲಗ್ಗೆ!

Voiceoftulunadu

ಆಗಸ್ಟ್ 1 ರಂದು ಹೆಜಮಾಡಿ ಟೋಲ್ ವಿರುದ್ಧ, ಬೃಹತ್‌ ಪ್ರತಿಭಟನೆ:ಮಾಜಿ ಸಚಿವ ಸೊರಕೆಯವರ ಮಾರ್ಗದರ್ಶನದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನೇತೃತ್ವ;

Voiceoftulunadu

ಶ್ರೀ ಧಾಮ ಮಾಣಿಲ ಕ್ಷೇತ್ರದಲ್ಲಿ 48 ದಿನಗಳ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ: ಇದರ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ;

Voiceoftulunadu

Leave a Comment