September 5, 2026
Uncategorizedಕ್ರೈಮ್ಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಶಾಸಕ ಯಶ್ಪಾಲ್ ಸುವರ್ಣರಿಂದ ಅಸಂವಿದಾನಿಕ ಶಬ್ದ ಬಳಕೆ ಬಂಧನಕ್ಕೆ ಆಗ್ರಹ : ಬಂಧನಕ್ಕೆ ಆಗ್ರಹಿಸಿದ ಮುದರಂಗಡಿ ಗ್ರಾಮ ಪಂಚಾತ್ ಮಾಜಿ ಅಧ್ಯಕ್ಷ ಡೇವಿಡ್‌ ಡಿಸೋಜಾ ;

ವರದಿ /ಚಿತ್ರ :ಈ ಮೀಡಿಯಾ

ಮುದರಂಗಡಿ : ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭಾಸದಸ್ಯ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ವಾಲ್ ಸುವರ್ಣ ರನ್ನು ಬಂಧಿಸುವಂತೆ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್‌ ಡಿಸೋಜಾ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಸಭೆಯಲ್ಲಿ ಉಡುಪಿ ಶಾಸಕ ಯಶ್ವಾಲ್ ಸುವರ್ಣ ರವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕಠೋರ ಮಾತುಗಳನ್ನಾಡಿದ್ದರು.ಈ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ವತಿಯಿಂದ ಉಡುಪಿ, ಕಾಪು, ಪಡುಬಿದ್ರಿ ಸಹಿತ ಕೆಲವು ಠಾಣೆಗಳಲ್ಲಿ ದೂರು ಸಲ್ಲಿಸಲಾಗಿದ್ದರೂ, ಪೊಲೀಸರು ಯಶ್ವಾಲ್ ಸುವರ್ಣರವರಿಗೆ ನೋಟಿಸು ನೀಡಿ ಕೈತೊಳೆದುಕೊಂಡಿದ್ದಾರೆ.

ಯಶ್ಪಾಲ್ ಸುವರ್ಣರವರ ಬೆಂಬಲಿಗರು ಸಾಮಾಜಿಕ ಜಾಲ ತಾಣಗಳಲ್ಲಿ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕುತ್ತಿರುವುದನ್ನು ಪೊಲೀಸರು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ

ಯಶ್ಪಾಲ್ ಸುವರ್ಣರವರು ಈಗಾಗಲೇ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಕರಾವಳಿಯ ಜನರು ಉಡುಪಿಯಲ್ಲಿ ನಡೆದ ಹಾಜಬ್ಬ – ಹಸನಬ್ಬ ಪ್ರಕರಣವನ್ನು ಇನ್ನೂ ಮರೆತಿಲ್ಲ. ಪೊಲೀಸರು ತುರ್ತು ಕ್ರಮ ಕೈಗೊಳ್ಳುವಂತೆ ಡೇವಿಡ್ ಡಿಸೋಜಾ ಆಗ್ರಹಿಸಿದ್ದಾರೆ.

Related posts

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ : ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಮಾಜಿ ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ.”ಆಟಿಡೊಂಜಿ ದಿನ” ;

Voiceoftulunadu

ಬಂಟರ ಸಂಘ (ರಿ.) ಬಂಟ್ವಾಳ ತಾಲೂಕು,ಬಂಟರ ಸಂಘ ಸಿದ್ಧಕಟ್ಟೆ ವಲಯ ಇದರ ಆಶ್ರಯದಲ್ಲಿಆಟಿದ ಕೂಟ, ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ;

Voiceoftulunadu

ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ‘ರಾಮಾಯಣ’ ಟ್ರೇಲರ್ : ರಾಕಿಂಗ್ ಸ್ಟಾರ್ ಯಶ್, ಬಾಲಿ ವುಡ್ ನಟ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ದ ಚಿತ್ರದ ಟ್ರೇಲರ್ ;

Voiceoftulunadu

Leave a Comment