ವರದಿ/ ಚಿತ್ರ: ಈ ಮೀಡಿಯಾ
ಬೆಳಪು: ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾರು ಮತ್ತು ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಮಲ್ಲಾರು ಇಲ್ಲಿಯ ಶಾಲಾ ಎಸ್ಟಿಎಂಸಿ ಹಾಗೂ ಶಾಲಾಭಿಮಾನಿಗಳಿಂದ ವಿನೂತನ ರೀತಿಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ಶಿಕ್ಷಕರಿಗೆ ಬಹುಮಾನ ನೀಡಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯ ಆದಂ ದವಳಗಿ ಅವರನ್ನು ಮತ್ತು ಎಲ್ಲಾ ಶಿಕ್ಷಕ ವೃಂದದವರನ್ನು ಗೌರವಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಟಿಎಂಸಿ ಅಧ್ಯಕ್ಷ ಫಾರೂಕ್, ನಿವೃತ್ತ ಮುಖ್ಯೋಪಾಧ್ಯಾಯ ಆದಂ ದವಳಗಿ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶ್ಯಾಮಲತಾ, ಮೌಲಾನ ಆಜಾದ್ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ, ಶಹನವಾಜ್, ನೂರುದ್ದೀನ್ ಸಾಹೇಬ್. ಮಹೇಶ್ ಬೆಳಪು ಅಕ್ಟರ್ ಆಲಿ, ರಾಜೇಂದ್ರ ಬೆಳಪು, ಆರಿಫ್, ಆಸಿಫ್, ಗಪೂರ್, ಶಿಕ್ಷಕರು ಪೋಷಕರು, ಶಾಲಾ ಅಭಿಮಾನಿಗಳು ಉಪಸ್ಥಿತರಿದ್ದರು.
