July 6, 2026
ಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯಸ್ಥಳೀಯ/ಪ್ರಾದೇಶಿಕ ಸುದ್ದಿ

ಕೃತಕ ಬುದ್ಧಿ ಮತ್ತೆ ಬಳಸಿ ಮೂತ್ರನಾಳದ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯ ಅಭಿವೃದ್ಧಿ ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಾಧನೆ;

ವರದಿ /ಚಿತ್ರ:ಇ ಮೀಡಿಯಾ

ಬಂಟಕಲ್ : ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಪಲ್ಲವಿ ರಾಥೋಡ್, ಪೂಜಾ, ದೀಕ್ಷಾ ಹಾಗೂ ಅನುಶ್ಚಿತ ರವರು ವಿಭಾಗದ ಪ್ರಾಧ್ಯಾಪಕರಾದ ಡಾ. ಗಣೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಮೂತ್ರನಾಳದ ಸೋಂಕು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ತಂಡವು 8೦,೦೦೦ ಕ್ಕೂ ಹೆಚ್ಚು ರೋಗಿಗಳ ಮೂತ್ರದ ಪರೀಕ್ಷೆ ದಾಖಲೆಗಳನ್ನು ಒಳಗೊಂಡ ವಿಶಾಲ ದತ್ತಾಂಶವನ್ನು ಬಳಸಿಕೊಂಡು ಸುಧಾರಿತ ಯಂತ್ರ ಕಲಿಕೆ ವಿಧಾನದ ಮೂಲಕ ಮೂತ್ರನಾಳದ ಸೋಂಕನ್ನು ಅತ್ಯಂತ ನಿಖರವಾಗಿ ಪತ್ತೆ ಹಚ್ಚುವಸಾಮರ್ಥ್ಯವನ್ನು ಹೊಂದಿದೆ.

ಈ ವ್ಯವಸ್ಥೆಯಿಂದಾಗಿ ರೋಗಿಗಳಿಗೆ ವೈಯಕ್ತಿಕ ಆರೋಗ್ಯ ಮಾರ್ಗದರ್ಶನ, ಮುನ್ನೆಚ್ಚರಿಕೆ ಸಲಹೆಗಳು ಹಾಗೂ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಒದಗಿಸುತ್ತದೆ.ಈ ವ್ಯವಸ್ಥೆಯು ಗ್ರಾಮೀಣ ಪ್ರದೇಶದ ಜನರಿಗೆ ತ್ವರಿತ ಸುಲಭಹಾಗೂ ಪರಿಣಾಮಕಾರಿ ತಪಾಸಣೆ ಸೇವೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಮೂಲಕ ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಾಗೂ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವಲ್ಲಿ ಈ ಯೋಜನೆಯು ಮಹತ್ವದ ಕೊಡುಗೆಯನ್ನು ನೀಡಲಿದೆ.

Related posts

ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯಲ್ಲಿ 2027 ರ ಫೆ. 23 ರಿಂದ 28 ರ ತನಕ ನವೀಕರಣ ಬ್ರಹ್ಮಕಲಶೋತ್ಸವದೊಂದಿಗೆ ಅತ್ಯಪೂರ್ವ ತೆಪ್ಪೋತ್ಸವ;

Voiceoftulunadu

ಕೇರಳದ ಕೊಟ್ಟಿಯೂರು ಶಿವಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ

voiceoftulunadu

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್‌: ಸೈಬರ್ ಪೊಲೀಸರಿಗೆ ದೂರು ‘ಜಲಗಾರ ಯೂನಿವರ್ಸಿಟಿ‘ ಹೆಸರಿನ ನಕಲಿ ಖಾತೆಯಿಂದ ಮೆಸೇಜ್

voiceoftulunadu

Leave a Comment