September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಪಡುಬಿದ್ರಿ ಮುಂಡಾಲ ಯುವ ವೇದಿಕೆಯಿಂದ ಆಟಿದ ಅಂಗಲಾಪು ಕಾರ್ಯಕ್ರಮ : ಪಡುಬಿದ್ರಿಯ ಸುಜಾತಾ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ;

ವರದಿ /ಚಿತ್ರ: ಈ ಮೀಡಿಯಾ

ಪಡುಬಿದ್ರಿ : ಪಡುಬಿದ್ರಿ ಮುಂಡಾಲ ಯುವ ವೇದಿಕೆಯ ಆಯೋಜನೆಯಲ್ಲಿ ಆಟಿಯ ಸತ್ವ ಮತ್ತು ಸತ್ಯ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಚಾರ-ಆಟಿಯ ತೆನಸು-ಸಾಂಸ್ಕೃತಿಕ ಕಾರ್ಯಕ್ರಮ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ನಡೆಯಿತು.

ಆಟಿ ಕಳೆಂಜನಿಗೆ ಸಂಪ್ರದಾಯದಂತೆ ಊರಿನ ಮಾರಿ ಕಳೆಯುವ ಸಲುವಾಗಿ ಅಕ್ಕಿ-ಮೆನಸ್ಸು-ಅರಿಶಿನ-ತೆಂಗಿನಕಾಯಿ ಇತ್ಯಾದಿಯನ್ನು ನೀಡಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಆಟಿಯ ವಿಚಾರಧಾರೆಗಳನ್ನು ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಅದ್ಭುತವಾಗಿ ತಿಳಿಸಿ ಹೇಳಿದರು.

ಪ್ರದೀಪ್ ಆಚಾರ್ಯ, ರಾಜು ಹೆಜಮಾಡಿ, ಸದಾಶಿವ ಪಡುಬಿದ್ರಿ ಶುಭ ಹಾರೈಸಿದರು.ಮಂಜುನಾಥ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಉಮೇಶ್ ಬೊಗ್ಗರಿ ಲಚ್ಚಿಲ್, ರಾಮ್ ಪಲಿಮಾರು, ಕರಿಯ ಕೇರಿ, ನಿತೀನ್ ಸಾಲ್ಯಾನ್, ಪ್ರಕಾಶ್ ಮುಂಡೂರು, ಕು.ಅಶ್ವಿನಿ, ಕು. ಅರ್ಚನ ಉಪಸ್ಥಿತರಿದ್ದರು.

ಸುರೇಶ್ ಪಡುಬಿದ್ರಿ ಸ್ವಾಗತಿಸಿದರು. ಶ್ರೀಧ‌ರ್ ವಂದಿಸಿದರು, ಪ್ರಸನ್ನ ಪಡುಬಿದ್ರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸಂತೋಷ್ ನಂಬಿಯಾರ್ ನಿರೂಪಿಸಿದರು.

Related posts

ಪ್ರಿಯದರ್ಶಿನಿ ಸೊಸೈಟಿಯ ಸಾಧನೆ ಮಾದರಿಯಾಗಿದೆ, ಗ್ರಾಹಕರ ವಿಶ್ವಾಸಗಳಿಸಿದೆ : ಯು.ಟಿ.ಖಾದರ್

voiceoftulunadu

ಫಿಫಾ ವಿಶ್ವಕಪ್: ಅಂದು ಮೆಸ್ಸಿ ಸ್ನಾನ ಮಾಡಿಸಿದ್ದ ಮಗು ಇಂದು ಫೈನಲ್ನಲ್ಲಿ ಎದುರಾಳಿ!!

Voiceoftulunadu

ರಾಮಮಂದಿರ ವಿರೋಧಿಗಳೀಗ ರಾಮಭಕ್ತರಾಗಲು ಹೊರಟಿದ್ದಾರೆಯೇ? : ಶರಣ್ ಕುಮಾರ್ ಮಟ್ಟು,ಕಾಪು ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಕೌಂಟರ್;

Voiceoftulunadu

Leave a Comment